ಜಾತಿಗಣತಿ ವರದಿ ಮರು ಪರಿಶೀಲನೆ ಮಾಡಬೇಕು ಎಂಬುದು ನಮ್ಮ ಅಭಿಪ್ರಾಯ- ವಿಪಕ್ಷ ನಾಯಕ ಆರ್.ಅಶೋಕ್. ಬೀದರ್,ನವೆಂಬರ್,22,2023(..):ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಜಾತಿಗಣತಿ ವರದಿ ಮರು ಪರಿಶೀಲನೆ ಮಾಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದಿದ್ದಾರೆ. ಈ ಕುರಿತು ಬೀದರ್ ನಲ್ಲಿ ಮಾತನಾಡಿದ ಆರ್.ಅಶೋಕ್, ಒಕ್ಕಲಿಗ ಸಮುದಾಯದ ಶ್ರೀಗಳು, ಮುಖಂಡರು ಸಹಿ ಮಾಡಿದ್ದಾರೆ. ಆ ಪತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿ ಇತ್ತು. ಸಚಿವ ಸುಧಾಕರ್​ ಕೂಡ ಸಹಿ ಮಾಡಿದ್ದಾರೆ ಎಂದು ತಿಳಿಸಿದರು. : – - – -. .