ಬೆಂಗಳೂರಿನಲ್ಲಿ ಸಿಲಿಂಡರ್​ ಸ್ಫೋಟ: ಐವರಿಗೆ ಗಾಯ. ಬೆಂಗಳೂರು,ನವೆಂಬರ್,22,2023(..):ಅಡುಗೆ ಅನಿಲ ಸೊರಿಕೆಯಾಗಿ ಸಿಲಿಂಡರ್​ ಸ್ಫೋಟಗೊಂಡು ಐವರು ಗಾಯಗೊಂಢಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ವೀವರ್ಸ್ ಕಾಲೋನಿ ಬಳಿಯ ಮಾರುತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಾರ್ಟಿನ್ ಎಂಬುವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಉತ್ತರ ಪ್ರದೇಶದ ವಾರಾಣಸಿ ಮೂಲದ ಜಮಾಲ್, ನಾಜಿಯಾ, ಇರ್ಫಾನ್, ಗುಲಾಬ್, ಶಹಜಾದ್​ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಜಾನೆ 5.30ರ ಸುಮಾರಿಗೆ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟವಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ಕಿಟಕಿಗಳು ಛಿದ್ರವಾಗಿವೆ. ಮನೆಯ ಮುಂಭಾಗವಿದ್ದ ಕಾರಿನ ಗಾಜು ಕೂಡ ಪುಡಿಪುಡಿಯಾಗಿದೆ. : - – - -