ಪೋಕ್ಸೋ ಪ್ರಕರಣ: ಮುರುಘ ಶ್ರೀ ಮತ್ತೆ ಅರೆಸ್ಟ್. ದಾವಣಗೆರೆ, ನವೆಂಬರ್, 20,2023(..):ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘ ಶ್ರೀ ಮತ್ತೆ ಬಂಧನವಾಗಿದೆ. 2ನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗೆ ಬಂಧನ ವಾರೆಂಟ್ ಜಾರಿ ಮಾಡಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುರುಘ ಶ್ರೀ ಮತ್ತೆ ಅರೆಸ್ಟ್ ಆಗಿದ್ದಾರೆ. ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ನ್ಯಾಯಾಲಯ ಜಾರಿ ಮಾಡಿದ ಅರೆಸ್ಟ್ ವಾರೆಂಟ್ ಮೇರೆಗೆ ಮುರುಘಾಶ್ರಿಯನ್ನು ಬಂಧಿಸಿದ್ದಾರೆ. ಇಂದು ಕೋರ್ಟ್ ಅರೆಸ್ಟ್​ ವಾರೆಂಟ್ ಆದೇಶದ ಪ್ರತಿಪಡೆದುಕೊಂಡ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿ ಮುರುಘಾಶ್ರೀಗಳನ್ನು ಬಂಧಿಸಿದ್ದಾರೆ. ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದು ಮುರುಘಾಶ್ರೀ ನವೆಂಬರ್ 16ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಇದೀಗ ನಾಲ್ಕೇ ದಿನದಲ್ಲಿ ಮತ್ತೆ ಬಂಧನವಾಗಿದೆ. : - - – -.