ಯತೀಂದ್ರ ಅವರ ವೀಡಿಯೋ‌ ಪ್ರಕರಣದ ಬಗ್ಗೆ ಸುಖಾಸುಮ್ಮನೇ ಆರೋಪ ಮಾಡೋದು ಸರಿಯಲ್ಲ- ಮಾಜಿ ಸಿಎಂ ಜಗದೀಶ್ ಶೆಟ್ಟರ್. ಹುಬ್ಬಳ್ಳಿ,ನವೆಂಬರ್,16,2023(..):ಯತೀಂದ್ರ ಸಿದ್ದರಾಮಯ್ಯ ಅವರ ವೀಡಿಯೋ‌ ಪ್ರಕರಣದ ಬಗ್ಗೆ ಸುಖಾಸುಮ್ಮನೇ ಆರೋಪ ಮಾಡೋದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು. ಯತೀಂದ್ರ ಸಿದ್ದರಾಮಯ್ಯ ವೀಡಿಯೋ ವೈರಲ್ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾದ ಈ ರೀತಿ ಆರೋಪ‌ ಸಹಜ. ಯಾವುದೇ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಕೇವಲ ಹಿಟ್ ಆ್ಯಂಡ್ ರನ್ ರೀತಿ‌ ಆರೋಪಗಳು. ಯಾವುದೇ ಒಂದು ಭ್ರಷ್ಟಾಚಾರದ ಬಗ್ಗೆ ಆಧಾರ ಸಹಿತ ಆರೋಪ ಮಾಡುವ ಕೆಲಸಗಳಾಗುತ್ತಿಲ್ಲ ಎಂದರು. 40 ಕೋಟಿ ಹಣದ ಬಗ್ಗೆ ಬಿಜೆಪಿಯವರು ಆರೋಪ ಮಾಡಿದ್ದರು. ಅದರ ಬಗ್ಗೆ ಆಧಾರ ನೀಡಿ. ಕೇವಲ ಮಾದ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳಿಂದ ಆರೋಪ‌ ಮಾಡುತ್ತಾರೆ. ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋದು ಸ್ಷಷ್ಟವಾಗಿ ಆರೋಪ ಮಾಡಲಿ ಎಂದು ಜೆಡಿಎಸ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. : –- ’ –- - - .