ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ವರ್ಗಾವಣೆ ದಂಧೆ ನಡೆಯುತ್ತಿದೆ- ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ. ಬೆಂಗಳೂರು,ನವೆಂಬರ್,17,2023(..):ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಮೊನ್ನೆ ಐಟಿ ದಾಳಿಯಾದಾಗ ಸಿಕ್ಕ ಹಣ ಯಾವುದು. ಸಿಎಂ ಡಿಸಿಎಂ ಐಟಿ ದಾಳಿಯನ್ನ ಸ್ವಾಗತಿಸುವ ಬದಲು ಟೀಕೆ ಮಾಡಿದರು. ಐಟಿ ದಾಳಿ ನೋವು ತಂದಿದೆ ಎಂದಿದ್ದರು. ಕಾಂಗ್ರೆಸ್ ನವರು ಅಧಿಕಾರದ ಅಮಲಿನಲ್ಲಿ ತೇಲುತ್ತಿರುವುದು ದುರಾದೃಷ್ಟಕರ ಎಂದು ಕಿಡಿಕಾರಿದರು. ಜಮೀರ್ ಅಹ್ಮದ್ ಖಾನ್ ಹೇಳಿಕೆ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಜಮೀರ್ ಯಾವುದೋ ಒಂದು ಕೋಮಿನ ಜವಾಬ್ದಾರಿ ತೆಗೆದುಕೊಂಡಿಲ್ಲ. ಜಮೀರ್ ಅಹ್ಮದ್ ಖಾನ್ ನಿಮ್ಮ ಅಂತರಾಳದ ಮಾತನ್ನ ಹೇಳಿದ್ದೀರಿ. ಜಮೀರ್ ಹೇಳಿಕೆ ನಿಜಕ್ಕೂ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು. : - – – - – – - – .