ಜೆಡಿಎಸ್ ದೇವೇಗೌಡರ ಕುಟುಂಬದ ಪಕ್ಷವಷ್ಟೆ: ಬಿಜೆಪಿ ಜೊತೆ ವಿಲೀನವಾಗುತ್ತೆ- ಸಿಎಂ ಸಿದ್ಧರಾಮಯ್ಯ . ಬೆಂಗಳೂರು,ನವೆಂಬರ್,15,2023(..):ಜೆಡಿಎಸ್ ದೇವೇಗೌಡರ ಕುಟುಂಬದ ಪಕ್ಷವಷ್ಟೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿ ಜೊತೆ ವಿಲೀನವಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ನುಡಿದರು. ಇಂದು ಮಾತನಾಡಿದ ಸಿಎಂ ಸಿದ‍್ಧರಾಮಯ್ಯ, ಜೆಡಿಎಸ್ ಏನು ರಾಜಕೀಯ ಪಕ್ಷವಾ? ಅದು ದೇವೇಗೌಡರ ಕುಟುಂಬದ ಪಕ್ಷವಷ್ಟೇ. ಮುಂದಿನ ದಿನಗಳಲ್ಲಿ ಜೆಡಿಎಸ್, ಬಿಜೆಪಿ ಜತೆ ವಿಲೀನ ಆಗಲಿದೆ. ರಾಜಕೀಯ ಕಾರಣಕ್ಕೆ ಈಗ ವಿಲೀನವಾಗದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ವಿಲೀನ ಆಗುತ್ತದೆ ಎಂದು ಲೇವಡಿ ಮಾಡಿದರು. ಜೆಡಿಎಸ್ ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗಿ ಜಾತ್ಯಾತೀತ ಎಂಬ ಪದವನ್ನ ತೆಗೆದು ಹಾಕಬೇಕು ಅವರಾಗಿಯೇ ಜಾತ್ಯಾತೀತ ಪದ ತೆಗೆದು ಹಾಕಿದರೆ ಒಳ್ಳೆಯದು, ಇಲ್ಲದಿದ್ದರೆ ಜನರೇ ಅದನ್ನ ತೆಗೆದು ಹಾಕುತ್ತಾರೆ ಎಂದು ಸಿಎಂ ಸಿದ್ಧರಾಮಯ್ಯ ಕುಟುಕಿದರು. : – - - – -