ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಗುರಿ: ಬಿವೈ ವಿಜಯೇಂದ್ರಗೂ ಸಹಕಾರ ನೀಡಿ- ನಳೀನ್ ಕುಮಾರ್ ಕಟೀಲ್. ಬೆಂಗಳೂರು,ನವೆಂಬರ್,15,2023(..):ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಗುರಿ ಇದೆ. ಪಕ್ಷ ಸಂಘಟನೆಗೆ ನನಗೆ ಸಹಕಾರ ನೀಡಿದಂತೆ ಬಿವೈ ವಿಜಯೇಂದ್ರಗೂ ಸಹಕಾರ ನೀಡಿ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಮನವಿ ಮಾಡಿದರು. ಬಿವೈ ವಿಜಯೇಂದ್ರ ಬಿಜೆಪಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ನೂತನ ಅಧ್ಯಕ್ಷ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ. ನಾವೆಲ್ಲಾ ಒಟ್ಟಾಗಿ ಹೋರಾಟ ನಡೆಸುತ್ತೇವೆ. ಬಿಎಸ್ ವೈ ಸಿಎಂ ಆಗಿದ್ದಾಗ ನನಗೆ ಅಧ್ಯಕ್ಷಗಿರಿ ಸಿಕ್ಕಿತ್ತು. ನಾನು 4 ವರ್ಷ 3 ತಿಂಗಳು ಅಧಿಕಾರದಲ್ಲಿದ್ದೆ. ಕೋವಿಡ್ ಕಾಲದಲ್ಲೂ ಪಕ್ಷ ಸಂಘಟನೆ ಮಾಡಿದ್ದೇನೆ. ಬಿವೈ ವಿಜಯೇಂದ್ರ ಸಂಘಟನಾಚತುರ. ನನ್ನ ಜತೆ ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನನಗೆ ಸಹಕರಿಸಿದಂತೆ ವಿಜಯೇಂದ್ರಗೂ ಸಹಕಾರ ಕೊಡಿ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು. : – -28 – - – - .