ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ಬಿವೈ ವಿಜಯೇಂದ್ರ ಪ್ರಮಾಣವಚನ: ಬಿಜೆಪಿ ಕಚೇರಿಯಲ್ಲಿ ಹೋಮ, ಹವನ ಬೆಂಗಳೂರು.ನವೆಂಬರ್,15,2023(..): ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಇಂದುಬಿವೈ ವಿಜಯೇಂದ್ರಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿದ್ದು, ನಿನ್ನೆ ದುರ್ಗಾಹೋಮ, ಗಣಪತಿ ಹೋಮ ನಡೆದಿದೆ. ಇನ್ನು ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ ಗಳು ಮಿಂಚುತ್ತಿವೆ. ಈಗಾಗಲೇ ಬಿಜೆಪಿ ಕಚೇರಿಗೆ ಬಿವೈ ವಿಜಯೇಂದ್ರ ಆಗಮಿಸಿದ್ದು ಬಿಜೆಪಿ ಭವ್ಯ ಸ್ವಾಗತ ಕೋರಿದ್ದು ಕೆಲವೇ ಕ್ಷಣಗಳಲ್ಲಿ ಅಧಿಕಾರ ಸ್ವೀರಿಸಲಿದ್ದಾರೆ. : - – - -.