ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಬಿಎಸ್ ವೈ ಬಳಸಿಕೊಳ್ಳಲು ನಾಟಕೀಯ ತಂತ್ರ- ಸಚಿವ ಎಂ.ಬಿ ಪಾಟೀಲ್ ಟೀಕೆ. ಬೆಂಗಳೂರು,ನವೆಂಬರ್,11,2023(..):ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿರುವುದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಬಳಸಿಕೊಳ್ಳಲು ನಾಟಕೀಯ ತಂತ್ರವಷ್ಟೆ ಎಂದು ಸಚಿವ ಎಂ.ಬಿ ಪಾಟೀಲ್ ಟೀಕಿಸಿದರು. ಇಂದು ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಚುನಾವಣೆ ಮುಂಚೆಯೇ ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡಬೇಕಿತ್ತು. ಲಿಂಗಾಯತರು ಯಾರೂ ದಡ್ಡರಲ್ಲ. ಬಿಜೆಪಿ ತಂತ್ರ ಗೊತ್ತಾಗಿದೆ. ವಿಜಯೇಂಧ್ರ ರಾಜ್ಯಾಧ್ಯಕ್ಷರಾಗಿ ನೇಮಕ ಬಿಜೆಪಿಯ ನಾಟಕೀಯವಷ್ಟೆ. ಯಡಿಯೂರಪ್ಪರನ್ನ ಬಳಸಿಕೊಳ್ಳಲು ನಾಟಕೀಯ ತಂತ್ರ, ರೂಪಿಸಿದೆ ಎಂದರು. : - - –- –– -