ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ . ಬೆಂಗಳೂರು, ನವೆಂಬರ್,11,2023(..):ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಸಿಹಿಸುದ್ದಿ ನೀಡಿದ್ದು ಇನ್ಮುಂದೆ ಮೆಟ್ರೋ ಪ್ರಯಾಣಿಕರು ಟಿಕೆಟ್​​ಗಾಗಿ ಕ್ಯೂ ನಿಲ್ಲಬೇಕಿಲ್ಲ. ವಾಟ್ಸಪ್​​​, ಯಾತ್ರಾ ಕೋಡ್​​​​ ಬಳಸಿ ಟಿಕೆಟ್ ಖರೀದಿಸಬಹುದು. ಹೌದು, ಪ್ರತಿ ಬಾರಿಯೂ ಟಿಕೆಟ್ ​ಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವುದಕ್ಕೆ ಬ್ರೇಕ್ ಬಿದ್ದಿದೆ. ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಪರದಾಡುವ ಪ್ರಯಾಣಿಕರು ಇನ್ಮುಂದೆ ಮನೆ, ಕಚೇರಿ ಅಥವಾ ತಾವಿದ್ದ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಪಡೆಯಬುದು. ಜೊತೆಗೆ ಮೊಬೈಲ್​​​ ಟಿಕೆಟ್​ಗಳು ಟೋಕನ್​​​ ದರಕ್ಕಿಂತ 5% ರಿಯಾಯ್ತಿ ಇರಲಿದೆ. ಇದೇ ನವೆಂಬರ್‌ 16ರಿಂದ ಈ ಹೊಸ ಸೌಲಭ್ಯ ಸಿಗಲಿದೆ. ನವೆಂಬರ್‌ 16ರಿಂದಲೇ ಮೊಬೈಲ್‌ ಕ್ಯೂಆರ್‌ ಕೋಡ್‌ ಗ್ರೂಪ್‌ ಟಿಕೆಟ್‌ ಗಳನ್ನು ಪರಿಚಯಿಸಲು ಬಿಎಮ್​ಆರ್​ಸಿಎಲ್ ಮುಂದಾಗಿದೆ. ಪ್ರಸ್ತುತ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಗಳನ್ನು ಮೊಬೈಲ್‌ ಅಪ್ಲಿಕೇಷನ್‌ ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್‌ ನೀಡಲಾಗುತ್ತಿದೆ. ಗುಂಪು ಟಿಕೆಟ್‌ ಗಳನ್ನೂ ಕ್ಯೂಆರ್‌ ಕೋಡ್‌ ಮೂಲಕ ನೀಡಬೇಕು ಎಂದು ಪ್ರಯಾಣಿಕರು ಈ ಹಿಂದೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಮೊಬೈಲ್‌ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಜಾರಿಗೆ ತರಲಾಗಿದೆ. ಈ ಟಿಕೆಟ್‌ ಗಳು ಟೋಕನ್‌ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿಯನ್ನು ಹೊಂದಿರುತ್ತವೆ. ನ.16 ರಿಂದ ಒಮ್ಮೆ ಆರು ಜನರ ಗುಂಪು ಪ್ರಯಾಣಿಸಲು ಅನುಕೂಲವಾಗುವಂತೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳ ಪರಿಚಯ ಮಾಡಲಾಗುತ್ತಿದೆ. : – - -.