ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಕಿಂಗ್ ಪಿನ್ ಆರ್.ಡಿ ಪಾಟೀಲ್ ಬಂಧನ. ಕಲ್ಬುರ್ಗಿ,ನವೆಂಬರ್,10,2023(..):ಕೆಇಎ ನಡೆಸಿದ್ದ ಎಫ್ ಡಿಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರ್.ಡಿ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಫಜಲಪುರ –ಮಹಾರಾಷ್ಟ್ರ ಗಡಿಯಲ್ಲಿ ಆರ್.ಡಿ ಪಾಟೀಲ್ ನನ್ನು ಕಲ್ಬುರ್ಗಿ ಜಿಲ್ಲೆ ವಿಶೇಷ ಪೊಲೀಸರ ತಂಡ ಬಂಧಿಸಿದ್ದು ಕಲ್ಬರ್ಗಿಗೆ ಕರೆ ತಂದಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಕಳೆದ 12 ದಿನಗಳಿಂದ ಆರ್.ಡಿ ಪಾಟೀಲ್ ತಲೆಮರೆಸಿಕೊಂಡಿದ್ದ. ಬೆಳಿಗ್ಗೆಯಷ್ಟೆ ಆರ್.ಡಿ ಪಾಟೀಲ್ ಸಹಚರ ಶಿವಕುಮಾರ್ ಎಂಬುವವರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. : - - –- -.