ಅಹಿಂದ ಸ್ವಾಭಿಮಾನ ಹೆಚ್ಚಿಸಲು ಸಮಾವೇಶ: ಮೊದಲು ಅಶೋಕ್ ರಾಜೀನಾಮೆ ನೀಡಲಿ-ಸಿಎಂ ಸಿದ್ದರಾಮಯ್ಯ ರಾಯಚೂರು,ಅಕ್ಟೋಬರ್,5,2024 (..):ನಾನು ರಾಜೀನಾಮೆ ನೀಡಿದರೇ ಸಿಎಂ ರಾಜೀನಾಮೆ ನೀಡ್ತಾರಾ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಇಂದು ರಾಯಚೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಹಿಂದ ಸ್ವಾಭಿಮಾನ ಹೆಚ್ಚಿಸಲು ಸಮಾವೇಶ ಮಾಡಲಾಗುತ್ತಿದೆ. ವಿಪಕ್ಷಗಳು ಸುಳ್ಳು ಆರೋಪ ಮಾಡಿದ್ರೆ ರಾಜೀನಾಮೆ ಕೊಡಬೇಕಾ? ಆರ್. ಅಶೋಕ್ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಮುಡಾ ಕೇಸ್ ನಲ್ಲಿ ಸಿಎಂ ಭಯಗೊಂಡಿದ್ದಾರೆಂಬ ವಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ನಾನು ಯಾವುದೇ ತಪ್ಪು ಮಾಡಿಲ್ಲ. ಯಾಕೆ ಭಯಪಡಬೇಕು. ನಾನು ಯಾರಿಗೂ ಭಯಪಡುವ ವ್ಯಕ್ತಿ ಅಲ್ಲ ವಿಪಕ್ಷಗಳು ಸುಳ್ಳು ಆರೋಪ ಮಾಡಿದರೇ ನಾವು ಉತ್ತರ ಕೊಡುತ್ತೇವೆ ಎಂದರು. : . , , ,