ಟಿಆರ್’ಪಿ ಲಿಸ್ಟ್’ನಲ್ಲಿ ನಂ 1 ಸ್ಥಾನಕ್ಕೇರಿದ ಬಿಗ್ ಬಾಸ್ ಕನ್ನಡ ! ಬೆಂಗಳೂರು, ನವೆಂಬರ್ 10, 2023 (..): ಬಹಳ ದಿನಗಳ ಬಳಿಕ ಬಿಗ್ ಬಾಸ್ ಕನ್ನಡ ಟಿಆರ್‌ಪಿ ಲಿಸ್ಟ್‌ನಲ್ಲಿ ನಂ 1 ಸ್ಥಾನಕ್ಕೇರಿದೆ. ಹೌದು, ಈ ಬಾರಿ ಬಿಗ್ ಬಾಸ್‌ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಗ್ ಬಾಸ್ ಮನೆಯ ಟಾಸ್ಕ್‌ಗಳಿಂದ ಹಿಡಿದು ಪ್ರತಿಯೊಂದು ಅಂಶವೂ ಹೊಸತನದಿಂದ ಕೂಡಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಭರ್ಜರಿಯಾಗಿ ಮುನ್ನುಗುತ್ತಿದೆ ಅನ್ನುವುದಕ್ಕೆ ಈಗ ಬಂದಿರೋ ಟಿಆರ್‌ಪಿ ಲಿಸ್ಟ್ ಸಾಕ್ಷಿ. ಈ ವಾರ ಟಿಆರ್‌ಪಿಯಲ್ಲಿ ಬಿಗ್ ಬಾಸ್ ನಂ 1 ಸ್ಥಾನಕ್ಕೇರಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡುವ ಶನಿವಾರದ ಸಂಚಿಕೆ ಅತೀ ಹೆಚ್ಚು ಅಂದರೆ, 8.1 ಟಿವಿಆರ್ ಅನ್ನು ಪಡೆದುಕೊಂಡಿದೆ. ಭಾನುವಾರ ಕೂಡ 7.6 ಟಿವಿಆರ್ ಸಿಕ್ಕಿದೆ. ಉಳಿದ ದಿನಗಳಲ್ಲಿ 7.5ನಷ್ಟು ಟಿವಿಆರ್ ಲಭಿಸಿದೆ. ಇಷ್ಟು ದಿನ ಕಿರುತೆರೆಯಲ್ಲಿ ಧಾರಾವಾಹಿಗಳು ಟಿಆರ್ ಪಿ ವಿಷಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದವು. ಇದೀಗ ಬಿಗ್ ಬಾಸ್ ಅದನ್ನು ಬದಲಿದೆ.