ಕೊಹ್ಲಿ- ರೋಹಿತ್ ಶರ್ಮಾ ಬಯೋಪಿಕ್’ನಲ್ಲಿಯೂ ನಟಿಸುವ ಆಸೆ ಎಂದ ಶಾಹಿದ್ ಕಪೂರ್ ಬೆಂಗಳೂರು, ನವೆಂಬರ್ 03, 2023 (..):ನಟ ಶಾಹಿದ್ ಕಪೂರ್ ಅವರು ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಇಬ್ಬರ ಬಯೋಪಿಕ್‌ನಲ್ಲಿಯೂ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ನಾನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ. ಅವರಿಬ್ಬರ ಜೀವನ ಚರಿತ್ರೆಯಲ್ಲಿ ನಟಿಸುವುದು ನನ್ನ ಭಾಗ್ಯ ಎಂದಿದ್ದಾರೆ ಶಾಹಿದ್ ಕಪೂರ್. ಕೊಹ್ಲಿ-ರೋಹಿತ್‌ ಲೈಫ್‌ಸ್ಟೋರಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾವನ್ನ ಯಾರು ನಿರ್ದೇಶನ ಮಾಡ್ತಾರೆ? ಯಾವಾಗ ತೆರೆಗೆ ಬರುತ್ತೆ? ಎಂಬ ಹತ್ತಾರು ಪ್ರಶ್ನೆಗಳಿಗೆ ಇನ್ನು ಉತ್ತರ ಸಿಗಬೇಕಿದೆ. ವಿಶ್ವದಾದ್ಯಂತ ತನ್ನದೇ ಅಭಿಮಾನಿ ಬಳಗ ಹೊಂದಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಸದ್ಯ ವಿಶ್ವಕಪ್‌ನಲ್ಲಿ ಬ್ಯುಸಿಯಾಗಿದ್ದಾರೆ.