ನಾಡಿನ ಜನತೆಗೆ ಗಣೇಶ ಹಬ್ಬದ ಶುಭಕೋರಿದ ಸಿಎಂ ಸಿದ್ದರಾಮಯ್ಯ ಬೆಂಗಳೂರು,ಸೆಪ್ಟಂಬರ್,7,2024 (..):ಇಂದು ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮವಾಗಿದ್ದು ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣೇಶ ಹಬ್ಬದ ಶುಭ ಕೋರಿದ್ದಾರೆ. ಟ್ವೀಟ್ ಮಾಡಿ ಶುಭಕೋರಿರುವ ಸಿಎಂ ಸಿದ್ದರಾಮಯ್ಯ, ನಾಡಿನ ಜನತೆಗೆ ಶುಭ ಕೋರಿರುವ ಸಿಎಂ ಸಿದ್ದರಾಮಯ್ಯ, ನಾಡಬಂಧುಗಳಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಸಂಕಷ್ಟಹರ ಗಣೇಶನು ಬದುಕಲ್ಲಿ ಎದುರಾಗುವ ಸಕಲ ವಿಘ್ನಗಳನ್ನು ಎದುರಿಸುವ ಆತ್ಮಬಲವನ್ನು ನಿಮ್ಮೆಲ್ಲರಲ್ಲೂ ತುಂಬಲಿ ಎಂದು ಹಾರೈಸುತ್ತೇನೆ. ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸೋಣ, ಇದರ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ ಎಂದು ತಿಳಿಸಿದ್ದಾರೆ. : , , ,