ಔಟ್ ಡೇಟೆಡ್ ಫೋನ್ ಅನ್ನು ತಿಪ್ಪೆಗೆ ಎಸೆದ ಜನ: ಕೈ ಸರಕಾರದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ ಬೆಂಗಳೂರು, ಅಕ್ಟೋಬರ್ 27, 2023 (..):ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.‌ ದೆಹಲಿಯಲ್ಲಿ ನಡೆದ ಟೆಲಿಕಾಂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಔಟ್‌ ಡೇಟೆಡ್‌ ಫೋನ್‌ ಅನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. ಔಟ್‌ ಡೇಟೆಡ್‌ ಫೋನ್‌ ಗಳ ಸ್ಕ್ರೀನ್‌ ಕಾರ್ಯನಿರ್ವಹಿಸುವುದಿಲ್ಲ, ಅದೇ ರೀತಿ ಹಿಂದಿನ ಸರ್ಕಾರ ಕೂಡಾ ಕೆಟ್ಟು ಹೋದ ಸ್ಥಿತಿಯಲ್ಲಿತ್ತು ಎಂದು ಮೋದಿ ವಾಗ್ದಾಳಿ ನಡೆಸಿದರು. ಗೂಗಲ್‌ ಕೂಡಾ ಭಾರತದಲ್ಲಿ ಫಿಕ್ಸೆಲ್‌ ಫೋನ್‌ ಉತ್ಪಾದಿಸುವುದಾಗಿ ಘೋಷಿಸಿದೆ. ಸ್ಯಾಮ್‌ ಸಂಗ್‌ ಫೋಲ್ಡ್‌ 5, ಆಪಲ್‌ ಐಫೋನ್‌ 15 ಭಾರತದಲ್ಲಿ ಉತ್ಪಾದನೆಯಾಗಲಿದೆ. ಇದು ಭಾರತದ ಸಾಧನೆಯನ್ನು ಸಾರಲಿದೆ. ಇಡೀ ಜಗತ್ತು ಮೇಡ್‌ ಇನ್‌ ಇಂಡಿಯಾ ಫೋನ್‌ ಗಳನ್ನು ಬಳಸುವಂತೆ ಹೇಳುತ್ತಿವೆ ಎಂದು ಪ್ರಧಾನಿ ಹೇಳಿದರು.