ಅಣೆ ಪ್ರಮಾಣ ಹೇಳಿಕೆ: ಮಾಜಿ ಸಿಎಂ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಚಿವ ಶರಣಬಸಪ್ಪ ದರ್ಶನಾಪುರ್. ಯಾದಗಿರಿ,ಅಕ್ಟೋಬರ್,26,2023(..):ವರ್ಗಾವಣೆಯಲ್ಲಿ ಕಾಂಗ್ರೆಸ್ ನಾಯಕರು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ಸಂಬಂಧ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಹೇಳಿಕೆ ನೀಡಿದ್ದರು. ಹೆಚ್.ಡಿ ಕುಮಾರಸ್ವಾಮಿಗೆ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಶರಣಬಸಪ್ಪ ದರ್ಶನಾಪುರ್, ಮೊದಲು ನಾನು ಬಹಳ ಸ್ವಚ್ಛ ಇದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಪ್ರಮಾಣ ಮಾಡಲಿ ಆಮೇಲೆ ನಾವು ಪ್ರಮಾಣ ಮಾಡುವುದನ್ನು ನೋಡೋಣ ಎಂದು ಟಾಂಗ್ ನೀಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, ಹೆಚ್.ಡಿಕೆ ಹತಾಶರಾಗಿದ್ದಾರೆ. ಕುಮಾರಸ್ವಾಮಿ ಬಗ್ಗೆ ಮಾತಾಡೋಕೆ ಏನೂ ಉಳಿದಿಲ್ಲ. ಕುಮಾರಸ್ವಾಮಿಗೆ ಅಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು. ಮೊದಲು ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂದು ಹೇಳುತ್ತಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿಯನ್ನ ಮೀರಿಸುವವರು ಯಾರೂ ಇಲ್ಲ. ಕ್ರಿಕೆಟ್ ಮ್ಯಾಚ್ ನೋಡಿದ್ದ ಸಿಎಂ ಸಿದ್ದರಾಮಯ್ಯಗೆ ಟೀಕೆ ಮಾಡಿದರು. ಅವರು ಸಿನಿಮಾಗಳನ್ನ ಮಾಡಲ್ವಾ, ಅವರ ಮಗ ಸಿನಿಮಾ ಮಾಡ್ತಾರೆ. ಸಿನಿಮಾ ಮಾಡೋರಿಗೆ ಬೈಬೇಕಾ ನೋಡುವವರಿಗೆ ಬೈ ಬೇಕಾ ಎಂದು ಟಾಂಗ್ ಕೊಟ್ಟರು. : --- -..