ಕೋವಿಡ್ ಹಗರಣ ವರದಿ ಸಲ್ಲಿಕೆ: ರಾಜೀನಾಮೆ ಕೊಡಬೇಕಾಗುತ್ತೆ ಎಂದು ಪಿತೂರಿ-ಬಿವೈ ವಿಜಯೇಂದ್ರ ಟೀಕೆ ಬೆಂಗಳೂರು,ಸೆಪ್ಟಂಬರ್,6,2024 (..):ಕೋವಿಡ್ ಹಗರಣ ಕುರಿತ ವರದಿಯನ್ನ ಸಲ್ಲಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದೊಂದು ಪಿತೂರಿ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಬೆದರಿಕೆಗಳು ಕುತಂತ್ರಗಳಿಗೆ ನಾವು ಭಯ ಪಡಲ್ಲ, ಮುಡಾ ಮತ್ತು ವಾಲ್ಮಿಕಿ ಹಗರಣ ವಿರುದ್ದ ಹೋರಾಟ ಮುಂದುವರೆಸುತ್ತೇವೆ. ಕಾಂಗ್ರೆಸ್ ನ ಪರಿಸ್ಥಿತಿ ಗೊತ್ತಾಗುತ್ತೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಪಿತೂರಿ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು. : , , , ,