: ಅಮೇರಿಕಾ ಕೌನ್ಸುಲೇಟ್‌ ಜನರಲ್‌ ಮೆಚ್ಚುಗೆ ಪಡೆದ 100 ವರ್ಷ ಹಳೆ ದರ್ಬಾರ್‌ ಕುರ್ಚಿ.! , . ಮೈಸೂರು, ಸೆ.06,2024: (..) ಮೈಸೂರು ಅರಮನೆಯ ದರ್ಬಾರ್ ಕೊಠಡಿಯಲ್ಲಿ ಬಳಸಲಾಗುತ್ತಿದ್ದ ಕುರ್ಚಿಗಳು ನೂರು ವರ್ಷಗಳಷ್ಟ ಹಳೆಯವು. ಆದರೂ ಈಗಲು ಅದರ ಸೌಂಧರ್ಯ, ಆಕರ್ಷಣೆ ಮಾತ್ರ ಮಾಸಿಲ್ಲ. ಅರಮನೆಗೆ ಭೇಟಿ ನೀಡುವ ಬಹುತೇಕ ವಿದೇಶಿಗರಿಗೆ ಈ ಖುರ್ಚಿ ಬಗ್ಗೆ ವಿಶೇಷ ವ್ಯಾಮೋಹ. ಈ ಸಲುವಾಗಿಯೇ ಇದರ ಫೋಟೋ ಕ್ಲಿಕ್ಕಿಸಿಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ವಿಶ್ವವಿಖ್ಯಾತ ಮೈಸೂರು ಅರಮನೆ ಬಗ್ಗೆ ತಿಳಿದುಕೊಂಡಷ್ಟು ಮತ್ತಷ್ಟು ಮಾಹಿತಿಗಳು ಲಭಿಸುತ್ತಲೇ ಇರುತ್ತವೆ. ಈ ಪೈಕಿ ಮೈಸೂರು ಮಹಾರಾಜರು ದರ್ಬಾರ್‌ ನಡೆಸುವ ವೇಳೆ ಗಣ್ಯರು ಆಸೀನರಾಗುವ ಸಲುವಾಗಿ ಬಳಸುತ್ತಿದ್ದ ದರ್ಬಾರ್‌ ಚೇರ್‌ ಗಳದ್ದೇ ಒಂದು ಇತಿಹಾಸ. ರಾಜರ ದರ್ಬಾರು ನಡೆಯುತ್ತಿದ್ದ ವೇಳೆ ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು. ಈ ಚೇರುಗಳು ತುಂಬಾ ಐತಿಹಾಸಿಕ ಮತ್ತು ಬಹಳ ಶ್ರೀಮಂತವಾಗಿವೆ. ಈ ಕುರ್ಚಿಗಳನ್ನು ನವಾಬ್ ಖಾಸರತ್ತುಲ್ಲಾ ಖಾನ್ ಎಂಬ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ತಯಾರಿಸಲಾಗಿತ್ತು. ಅವುಗಳ ಮೇಲೆ ಅಲಂಕಾರಿಕ ಪತ್ತೆ ಕೆಲಸ, ಶಿಲ್ಪಕಲೆಯನ್ನು ಕಾಣಬಹುದು. ಗೋಡೌನ್‌ ಟು ಹಾಲ್‌ : ನೂರಾರು ವರ್ಷದ ಹಿನ್ನೆಲೆಯುಳ್ಳ ಈ ದರ್ಬಾರ್‌ ಕುರ್ಚಿಗಳನ್ನು ಗೋಡೌನ್‌ ನಲ್ಲಿ ಇರಿಸಲಾಗಿತ್ತು. ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರ ಕಣ್ಣಿಗೆ ಬಿದ್ದ ಮೇಲೆ ಈ ಕುರ್ಚಿಗಳಿಗೆ ಮತ್ತೆ ಗತ ವೈಭವ ಮರುಕಳಿಸಿದೆ. ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರು ಹೇಳಿದಿಷ್ಟು.. ಈ ಹಿಂದೆ ಮಹಾರಾಜರು ದರ್ಬಾರು ನಡೆಸುವಾಗ ಈ ಕುರ್ಚಿಗಳನ್ನು ಬಳಸಲಾಗುತ್ತಿತ್ತು. ದಿವಾನರುಗಳು ಸೇರಿದಂತೆ ಇತರೆ ಅರಮನೆಗೆ ಸೇರಿದ ಗಣ್ಯರು ಈ ಕುರ್ಚಿಯಲ್ಲಿ ಆಸೀನರಾಗಿದ್ದರು. ಸಿ.ರಂಗಚಾರ್ಲು, ಪೂರ್ಣಯ್ಯ, ಸರ್.ಎಂ.ವಿಶ್ವೇಶ್ವರ್ಯ, ಮಿರ್ಜಾ ಇಸ್ಮಾಯಿಲ್‌ ಹೀಗೆ ಅನೇಕರು ಈ ಕುರ್ಚಿಯಲ್ಲಿ ಕುಳಿತ್ತಿದ್ದಿರಬಹುದು, ಬಲ್ಲವರು ಯಾರು..? ಆದ್ದರಿಂದ ಈ ಕುರ್ಚಿಗಳ ಮಹತ್ವ ಅರಿತು, ಗೋಡೌನಿಂದ ಅದನ್ನು ಅರಮನೆ ಮಂಡಳಿ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು. ಅಂದಾಹು ೨೦೦ ಕ್ಕೂ ಹೆಚ್ಚು ಕುರ್ಚಿಗಳಿದ್ದು, ಈ ಪೈಕಿ ಅರ್ದದಷ್ಟು ಚೇರುಗಳು ದುರಸ್ತಿಯಲ್ಲಿವೆ. ಇವುಗಳನ್ನು ಸಂರಕ್ಷಿಸು ನಿಟ್ಟಿನಲ್ಲಿ ಕಾರ್ಯಮಗ್ನವಾಗಿದ್ದೇವೆ. ಈ ದರ್ಬಾರ್‌ ಚೇರುಗಳನ್ನು ದಸರಾ ಅವಧಿಯಲ್ಲಿ ವಿಶೇಷವಾಗಿ ಅರಮನೆಯ ಖಾಸಗಿ ದರ್ಬಾರಿನ ವೇಳೆಯಲ್ಲಿ ಬಳಸಲಾಗುತ್ತದೆ. ಈ ಖುರ್ಚಿಗಳು, ಮೈಸೂರಿನ ರಾಜಕುಟುಂಬದ ವೈಭವ ಮತ್ತು ಪ್ರಖ್ಯಾತಿಯ ಸಂಕೇತವಾಗಿ ಇಂದು ಕೂಡ ಉಳಿದುಕೊಂಡಿವೆ. ಅಮೇರಿಕಾ ಕೌನ್ಸುಲೇಟ್‌ ಜನರಲ್‌ ಮೆಚ್ಚುಗೆ: ಮೈಸೂರು ಅರಮನೆಗೆ ಭೇಟಿ ನೀಡಿದ್ದ ಅಮೇರಿಕಾ ಕೌನ್ಸುಲೇಟ್‌ ಜನರಲ್‌ , ದರ್ಬಾರ್‌ ಕುರ್ಚಿಗಳನ್ನು ಕಂಡು ಪುಳಕಿತಗೊಂಡಿದ್ದು ಮಾತ್ರವಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಅವರು ಮುಂದುವರಿದು, ಈ ಕುರ್ಚಿಗಳ ವಿನ್ಯಾಸದ ಬಗೆಗೂ ವಿದೇಶಿಗರಿಗೆ ಭಾರಿ ಮೆಚ್ಚುಗೆ. ಕಾರಣ ಈ ಕುರ್ಚಿಯಲ್ಲಿ ದೀರ್ಘಕಾಲ ಕುಳಿತರು ಬೆನ್ನು ನೋವಿನ ಸಮಸ್ಯೆ ಕಾಡದು ಎಂಬುದು ಅವರ ಭಾವನೆ ಎಂದರು. : , 100--, , , . : , . , .