ಪ್ರಧಾನಿ ಮೋದಿಗೆ ಪತ್ರ ಬರೆದ ಸಚಿವ ದಿನೇಶ್ ಗುಂಡೂರಾವ್: ಕಾರಣ ಏನು..? ಬೆಂಗಳೂರು,ಸೆಪ್ಟಂಬರ್,6,2024 (..):ಆರೋಗ್ಯ ವಿಮೆ ಮೇಲಿನ ತೆರಿಗೆ ಮರು ಪರಿಶೀಲನೆ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಗ್ಯ ವಿಮೆಯ ಮೇಲಿನ 18 ಶೇ. ತೆರಿಗೆಯನ್ನು ಮರುಪರಿಶೀಲನೆಗೆ ಶಿಫಾರಸು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ. ಆರೋಗ್ಯ ವಿಮೆ ಮೇಲಿನ ಜಿಎಸ್ ಟಿ ಪರಿಶೀಲಿಸಬೇಕು. ಹಚ್ಚಿನ ತೆರಿಗೆ ಜನರನ್ನು ಆರೋಗ್ಯ ವಿಮೆಯಿಂದ ದೂರ ತಳ್ಳುತ್ತಿದೆ. ಎಮರ್ಜೆನ್ಸಿ ಚಿಕಿತ್ಸೆಗೆ ಆರ್ಥಿಕವಾಗಿ ಕುಟುಂಬಗಳು ಸಂಕಷ್ಟಕ್ಕೀಡಾಗುತ್ತಿವೆ. ಹೀಗಾಗಿ ಸೆ.9ರಂದು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆ ಮೇಲಿನ 18% ತೆರಿಗೆಯನ್ನ ಪರಿಶೀಲಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ. : , , ,