ಹೋಮಕ್ಕಾಗಿ ಮೈಸೂರಿಂದ ಆಗಮಿಸಿದ್ದ ಚಾಮುಂಡಿಬೆಟ್ಟದ ಅರ್ಚಕರಿಗೆ ಕೃತಜ್ಞತೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ. ಸಕಲೇಶಪುರ, ಸೆ.06,2024: (..) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗಾಗಿ ಪೂಜೆ ಮತ್ತು ಹೋಮ ನಡೆಸಲು ಮೈಸೂರಿಂದ ಆಗಮಿಸಿದ್ದ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರು. ಮೈಸೂರಿನ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ಹೋಮಗಳು ನೆರವೇರಿತು. ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ ಹಾಗೂ ಸಪ್ತಗಂಗಾ ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಬಳಿಕ ಇವರ ಮಾರ್ಗದರ್ಶನದಲ್ಲೇ ಹೆಬ್ಬಹಳ್ಳಿಯ ವಿತರಣಾ ತೊಟ್ಟಿ 4 ರಲ್ಲಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದರು. ಗೌರಿ ಹಬ್ಬದ ಪ್ರಯುಕ್ತ ತಾಯಿ ಸನ್ನಿದಿಯಲ್ಲಿ ಪೂಜಾ ಕಾರ್ಯಗಳ ಒತ್ತಡ ಇದ್ದರೂ ಯೋಜನೆಯ ಉದ್ಘಾಟನೆಯ ಪೂಜಾ ಕಾರ್ಯಗಳನ್ನು ನೆರವೇರಿಸಲು ಒಪ್ಪಿ ಬಂದ ದೀಕ್ಷಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಜ್ಞತೆ ಅರ್ಪಿಸಿದರು. : , , , , , , .