ಆಪರೇಷನ್ ಹಸ್ತ ಅಲ್ಲ, ಆಪರೇಷನ್ ಕಮಲ ಆಗುತ್ತೆ ಕಾದುನೋಡಿ-ಮಾಜಿ ಸಚಿವ ಮುರುಗೇಶ್ ನಿರಾಣಿ. ಬಾಗಲಕೋಟೆ,ಅಕ್ಟೋಬರ್,21,2023(..):ಮುಂಬರುವ ಲೋಕಸಭಾ ಚುನಾವಣೆಗೂ ಮೊದಲೇ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತೆ. ಆಪರೇಷನ್ ಹಸ್ತ ಆಗಲ್ಲ, ಆಪರೇಷನ್ ಕಮಲ ಆಗುತ್ತದೆ ಕಾದುನೋಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ನುಡಿದಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ಈ ಸರ್ಕಾರ ಬಂದಮೇಲೆ ಯಾವುದೇ ಅಭಿವೃದ್ಧಿ ಕಾರ್ಯ ನಡೀತಿಲ್ಲ. ಬಿಟ್ಟಿ ಭಾಗ್ಯದಿಂದ ಈ ವರ್ಷ 25,000 ಕೋಟಿ ರೂ. ಖರ್ಚು ಮಾಡಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಬಹಳ ಬೇಸತ್ತಿದ್ದಾರೆ. ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರಿಗೆ ಬಸ್​ ನಲ್ಲಿ ಸೀಟ್ ಸಿಗುತ್ತಿಲ್ಲ. ಮನೆ, ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ 60% ಹೆಚ್ಚುವರಿ ಬಿಲ್ ಬರುತ್ತಿದೆ. ಕರ್ನಾಟಕದಲ್ಲಿ ಈಗ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಕಿಡಿಕಾರಿದರು. ಡಿಸಿಎಂ ಡಿಕೆ ಶಿವಕುಮಾರ್​ ಮೇಲೆ ಸಿಬಿಐ ತೂಗುಗತ್ತಿ ವಿಚಾರ ಕುರಿತು ಮಾತನಾಡಿದ ಮುರುಗೇಶ್ ನಿರಾಣಿ, ಅವರು ತಪ್ಪು ಮಾಡಿರದೇ ಇದ್ದರೆ ಅವರಿಗೇನು ಆಗಲ್ಲ. ತಪ್ಪಿತಸ್ಥರಾಗಿದ್ದರೆ ಅವರಿಗೆ ಶಿಕ್ಷೆ ಆಗುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು. : – - – - .