ಶಾಸಕರಿಗೆ ಯಾವುದೇ ಅನುದಾನ ಕೊಟ್ಟಿಲ್ಲ: ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸರ್ಕಾರ ವಿಫಲ- ಬಿವೈ ವಿಜಯೇಂದ್ರ ಟೀಕೆ. ಚಿಕ್ಕೋಡಿ,ಅಕ್ಟೋಬರ್,21,2023(..):ಸರ್ಕಾರ ಶಾಸಕರಿಗೆ ಯಾವುದೇ ಅನುದಾನ ಕೊಟ್ಟಿಲ್ಲ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿವೈ ವಿಜಯೇಂದ್ರ ಟೀಕಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ವಿಜಯೇಂದ್ರ, ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಮಧ್ಯಂತರ ಬೆಳೆಹಾನಿ ಪರಿಹಾರವನ್ನ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಬಿಜೆಪಿ ನೂತನ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನ ಎರಡೂ ಒಟ್ಟಿಗೆ ಅತಿ ಶೀಘ್ರದಲ್ಲೇ ಆಗುತ್ತೆ ಎಂದು ಹೇಳಿದರು. ಬಿಎಸ್​ ಯಡಿಯೂರಪ್ಪ ಅವರ ರಾಜ್ಯ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಯಡಿಯೂರಪ್ಪ ಹಿರಿಯ ನಾಯಕರಿದ್ದಾರೆ, ಅವರು ಸ್ಚತಂತ್ರರು. ಅವರಿಗೆ ಯಾವಾಗ ಸರಿ ಅನಿಸುತ್ತೆ ಆಗ ಪ್ರವಾಸ ಮಾಡುತ್ತಾರೆ. ಬಿಎಸ್​ ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡುತ್ತಾರೆ. ಯಾರೂ ಕೂಡ ಅದನ್ನ ತಡೆಯುವಂತಹ ಪ್ರಯತ್ನ ಮಾಡುವುದಿಲ್ಲ, ಮಾಡುವ ಅವಶ್ಯಕತೆಯೂ ಇಲ್ಲ ಎಂದರು. : – - – -