ನಮ್ಮದು ಎಟಿಎಂ ಸರ್ಕಾರ ಎಂದು ಬಿಜೆಪಿ ಸಾಬೀತು ಮಾಡಲಿ-ಸಚಿವ ಸಂತೋಷ್ ಲಾಡ್ ಸವಾಲು. ಮೈಸೂರು,ಅಕ್ಟೋಬರ್,20,2023(..):ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಟಿಎಂ ಸರ್ಕಾರ ಭ್ರಷ್ಟಾಚಾರದ ದರ್ಬಾರ್ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದ ಬಿಜೆಪಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದ್ದಾರೆ. ಈ ಕುರಿತು ಮಾನಾಡಿದ ಸಚಿವ ಸಂತೋಷ್ ಲಾಡ್, ಎಲ್ಲಾ ತನಿಖಾ ಸಂಸ್ಥೆಗಳು ಬಿಜೆಪಿ ಕೈಯಲ್ಲಿವೆ. ನಮ್ಮದು ಎಟಿಎಂ ಸರ್ಕಾರ ಎಂದು ಬಿಜೆಪಿ ಸಾಬೀತು ಮಾಡಲಿ ಎಂದು ಸವಾಲೆಸೆದರು. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಯಾವೊಬ್ಬನ ಮನೆ ಮೇಲೆ ದಾಳಿಯಾಗಿಲ್ಲ ಕಾಂಗ್ರೆಸ್ ಅನ್ನು ಜೆಡಿಎಸ್ ಬಿಜೆಪಿ ಟಾರ್ಗೆಟ್ ಮಾಡುತ್ತಿವೆ. ಎಲ್ಲದಕ್ಕೂ ಉತ್ತರ ಸಿಗುತ್ತೆ ಕಾದು ನೋಡಿ ಎಂದು ಸಂತೋಷ್ ಲಾಡ್ ಎಚ್ಚರಿಕೆ ನೀಡಿದರು. : - - – - -.