ಸಿಸಿಬಿ ಪೊಲೀಸರಿಂದ ಓರ್ವ ನಕ್ಸಲೇಟ್ ಬಂಧನ ಬೆಂಗಳೂರು,ಸೆಪ್ಟಂಬರ್,6,2024 (..):ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ನಕ್ಸಲೇಟ್ ನನ್ನು ಬಂಧಿಸಿದ್ದಾರೆ. ಹರಿಯಾಣ ಮೂಲದ ನಕ್ಸಲೇಟ್ ಅನಿರುದ್ಧ ಬಂಧಿತ ಆರೋಪಿ. ಬಂಧಿತ ಅನಿರುದ್ಧ ಸಿಪಿಐ ಮವೋವಾದಿಗಳ ಪರ ಕೆಲಸ ಮಾಡಿದ್ದ. ನಿಷೇಧಿತ ಬರಹಗಳನ್ನ ರವಾನೆ ಮಾಡಿತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇದೀಗ ಅನಿರುದ್ದನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಸಿಸಿಬಿ ಪೊಲೀಸರು ಓರ್ವ ನಕ್ಸಲೇಟ್ ಬಂದಿಸಿದ್ದು ಆರೋಪಿ ಅನಿರುದ್ದನನ್ನು 15 ದಿನ ಪೊಲೀಸ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. : , , ,