ಥಿಯೇಟರ್’ಗಳಲ್ಲಿ ‘ಘೋಸ್ಟ್’ ಅಬ್ಬರ! ಶಿವಣ್ಣ ಅಭಿಮಾನಿಗಳ ಸಂಭ್ರಮ ಬೆಂಗಳೂರು, ಅಕ್ಟೋಬರ್ 19, 2023 (..):ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ ಘೋಸ್ಟ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಮುಂಜಾನೆಯಿಂದಲೇ ಥಿಯೇಟರ್ ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂಜಾನೆಯಿಂದಲೇ ಚಿತ್ರ ಪ್ರದರ್ಶನ ನಡೆಯುತ್ತಿದೆ. ಇಂದು ವಿಜಯ್ ನಟನೆಯ ತಮಿಳಿನ ಲಿಯೋ ಸಿನಿಮಾ ಕೂಡ ಬಿಡುಗಡೆಯಾಗಿದೆ. ಸಿನಿ ಪ್ರೇಕ್ಷಕರಿಗೆ ಇಂದು ಎರಡು ಸ್ಟಾರ್ ಸಿನಿಮಾಗಳ ಬಿಡುಗಡೆಯ ಖುಷಿ ಸಿಕ್ಕಿದೆ. ವಿಶೇಷ ಎಂದರೆ ಎರಡೂ ಸಿನಿಮಾಗಳೂ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿವೆ. ಕಲೆಕ್ಷನ್ ವಿಚಾರದಲ್ಲಿ ವಿಜಯ್ ಸಿನಿಮಾ ಘೋಸ್ಟ್ ಸಿನಿಮಾವನ್ನು ಹಿಂದಿಕ್ಕಬಹುದು ಎನ್ನಲಾಗಿದೆ. ಆದರೆ ಜೈಲರ್ ಸಿನಿಮಾ ಬಳಿಕ ಶಿವಣ್ಣನಿಗೆ ಪರಭಾಷೆಗಳಲ್ಲೂ ಅಭಿಮಾನಿಗಳು ಹೆಚ್ಚಾಗಿದ್ದು, ಒಳ್ಳೆಯ ಕಲೆಕ್ಷನ್ ಮಾಡುವ ವಿಶ್ವಾಸದಲ್ಲಿದೆ ಚಿತ್ರ ತಂಡ.