ದಸರಾ ಸಂಭ್ರಮ: ಮೊದಲ ದಿನ ಏನೆಲ್ಲಾ ಕಾರ್ಯಕ್ರಮ ಇಲ್ಲಿದೆ ಮಾಹಿತಿ… ಮೈಸೂರು, ಅಕ್ಟೋಬರ್ 15, 2023(..):ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಇಂದಿನಿಂದ 10 ದಿನಗಳ ಕಾಲ ಮೈಸೂರು ಬಣ್ಣಬಣ್ಣದ ಬೆಳಕಿನಲ್ಲಿ ಮಿಂದೇಳಲಿದೆ. ಇಂದಿನಿಂದ ಹತ್ತು ದಿನ ನಾನಾ ಬಗೆಯ ಕಾರ್ಯಕ್ರಮಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ. ದಸರಾ ಮೊದಲ ದಿನವಾದ ಇಂದು ನಾನಾ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಆ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ…