ಐಟಿ ದಾಳಿಗೂ ಡಿಕೆ ಶಿವಕುಮಾರ್ ಯಾವುದೇ ಸಂಬಂಧವಿಲ್ಲ- ಸಂಸದ ಡಿ.ಕೆ ಸುರೇಶ್. ಬೆಂಗಳೂರು,ಅಕ್ಟೋಬರ್,14,2023(..):ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಗೂ ಡಿಕೆ ಶಿವಕುಮಾರ್ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದರು. ಇಂದು ಮಾತನಾಡಿದ ಸಂಸದ ಡಿ.ಕೆ ಸುರೇಶ್ ಬೆಂಗೂರಿನ ನಡೆದ ಐಟಿ ದಾಳಿಗೂ ಡಿಕೆ ಶಿವಕುಮಾರ್ ಗೂ ಸಂಬಂಧವಿಲ್ಲ. ಐಟಿ ದಾಳಿ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿರುವುದಕ್ಕೆ ಇರಬೇಕು. ಪದೇ ಪದೇ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ. ಐಟಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಹೆಸರೇನಾದರೂ ಹೇಳಿದ್ದಾರಾ..? ಸುಮ್ಮನೆ ಡಿಕೆ ಶಿವಕುಮಾರ್ ಹೆಸರು ತಳಕು ಹಾಕುತ್ತಿದ್ದಾರೆ ಐಟಿ ದಾಳಿಗೂ ರಾಜ್ಯಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಐಟಿ ದಾಳಿ ಬಗ್ಗೆ ಕೇಂದ್ರ ಸಚಿವರ ಬಳಿ ಹೋಗಿ ಕೇಳಬೇಕು ಎಂದು ಡಿ.ಕೆ ಸುರೇಶ್ ಟಾಂಗ್ ನೀಡಿದರು. : – – - - .