ಕುಂಬಳಕಾಯಿ ಕಳ್ಳ ಅಂದ್ರೆ ಡಿಕೆಶಿ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಾರೆ- ಮಾಜಿ ಸಚಿವ ಅಶ್ವಥ್ ನಾರಾಯಣ್ ಟಾಂಗ್. ಬೆಂಗಳೂರು,ಅಕ್ಟೋಬರ್,14,2023(..):ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲಿನ ಐಟಿ ದಾಳಿ ವೇಳೆ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಂಚರಾಜ್ಯ ಚುನಾವಣೆಗೆ ಹಣ ಸಂಗ್ರಹ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧ ವಾಕ್ಸಮರ ಮುಂದುವರೆದಿದೆ. ಈ ಕುರಿತು ಹಾದಿ ಬೀದಿಯಲ್ಲಿರುವವರಿಗೆ ಉತ್ತರ ಕೊಡಲ್ಲ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿರುವ ಮಾಜಿ ಸಚಿವ ಅಶ್ವಥ್ ನಾರಾಯಣ್, ಡಿಕೆ ಶಿವಕುಮಾರ್ ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿನೋಡಿಕೊಳ್ತಾರೆ. ಜವಾಬ್ದಾರಿ ಇದ್ಧವರು ಹೇಳುವ ಮಾತಾ ಇದು ಹಾದಿಬೀದಿಯವರಿಗೆ ಉತ್ತರ ಕೊಡಬೇಡಪ್ಪ ಎಂದು ಕಿಡಿಕಾರಿದರು. ಒಕ್ಕಲಿಗರ ಬಗ್ಗೆ ಪ್ರೊ. ಭಗವಾನ್ ಅವಹೇಳನಕಾರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಭವಾವಾನ್ ಬುದ್ದಿ ಏರುಪೇರಾಗಿದೆ. ಜನರ ಭಾವನೆಗಳನ್ನ ಭಗವಾನ್ ಕೆಣಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. : - -