ನಾಳೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ ಮೈಸೂರು,ಅಕ್ಟೋಬರ್,14,2023(..):ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ದಸರಾ ಉಪಸಮಿತಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಅಕ್ಟೋಬರ್ 16ರಂದು ಸಂಜೆ 7 ಗಂಟೆಗೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕದ ಪ್ರದರ್ಶನವಿದೆ. ನಗರದ ಕಲಾಮಂದಿರ ಪಕ್ಕದ‌ ಕಿರು‌ ರಂಗಮಂದಿರದಲ್ಲಿ ‌ನಾಟಕ‌ ಪ್ರಯೋಗಗೊಳ್ಳಲಿದೆ. ಲೇಖಕ ಗಣೇಶ ಅಮೀನಗಡ ರಚಿಸಿರುವ ಈ ನಾಟಕವನ್ನು, ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್ ತಂಡ‌ ಪ್ರಸ್ತುತಪಡಿಸಲಿದೆ. ಒಂದೂವರೆ ಗಂಟೆಯ ಈ ನಾಟಕವು, ಕುವೆಂಪು ಅವರ ಮಂತ್ರ ಮಾಂಗಲ್ಯ ಆಧರಿಸಿದೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಬೇಕೆಂದು ತಂಡದ ಸಂಚಾಲಕ ಹರಿದತ್ತ ಪ್ರಕಟಣೆಯಲ್ಲಿ ಕೋರಿದ್ದಾರೆ. : – -‘ -