ಕಳವು ಮಾಡಿದ ಚಿನ್ನಾಭರಣ ಮಾರಾಟಕ್ಕೆ ಯತ್ನ: ಹೆಡ್ ಕಾನ್ಸಟೇಬಲ್ ಸೇರಿ ಇಬ್ಬರು ಮನೆಗಳ್ಳರು ಅರೆಸ್ಟ್ ಮೈಸೂರು,ಸೆಪ್ಟಂಬರ್,5,2024 (..):ಕಳವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನಿಸಿದ ಆರೋಪದ ಮೇಲೆ ಹೆಡ್ ಕಾನ್ಸಟೇಬಲ್ ಸೇರಿ ಇಬ್ಬರು ಮನೆಗಳ್ಳರನ್ನ ಮೈಸೂರು ಮಂಡಿ ಠಾಣಾ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಅಶೋಕ ಪುರಂ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ರಾಜು ಮನೆಗಳ್ಳರಾದ ನಜರುಲ್ಲಾ ಬಾಬು ಅಲೀಂ ಬಂಧಿತರು. ಆರೋಪಿ ಮನೆಗಳ್ಳರ ವಿರುದ್ದ ಮೈಸೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳುವು ಪ್ರಕರಣ ದಾಖಲಾಗಿದ್ದವು ಸುಮಾರು 400 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಮಧ್ಯೆ ಹೆಡ್ ಕಾನ್ಸಟೇಬಲ್ ರಾಜು 300 ಗ್ರಾಂ ಚಿನ್ನಾಭರಣ ಸ್ವೀಕರಿಸಿದ್ದ ಆರೋಪ ಕೇಳಿ ಬಂದಿದ್ದು, ನಜರುಲ್ಲಾ ಬಾಬು, ಅಲೀಂ ವಿಚಾರಣೆ ವೇಳೆ ಇದು ಬಹಿರಂಗವಾಗಿದೆ. ಹೆಡ್ ಕಾನ್ಸಟೇಬಲ್ ರಾಜು ಈ ಹಿಂದೆ ಸಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : , , , , ,