ಹಿರಿಯ ನಟಿ ಉಮಾಶ್ರೀ ಸೇರಿ ಮೂವರಿಗೆ ‘ಗೌರವ ಡಾಕ್ಟರೇಟ್ ಘೋಷಣೆ ಬಳ್ಳಾರಿ,ಸೆಪ್ಟಂಬರ್,5,2024 (..):ಸ್ಯಾಂಡಲ್ ವುಡ್ ಹಿರಿಯ ನಟಿ ಉಮಾಶ್ರೀ ಸೇರಿದಂತೆ ಮೂವರಿಗೆ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ಕಲೆ, ರಂಗಭೂಮಿ, ಸಮಾಜ ಸೇವೆ ವಿಭಾಗದಲ್ಲಿ ಸಾಧನೆ ಮಾಡಿದ ನಟಿ ಉಮಾಶ್ರೀ ಅವರಿಗೆ , ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ನಿರಂತರ ಸೇವೆಗಾಗಿ‌ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಹಾಗೂ ಕೈಗಾರಿಕೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಕೈ ಜೋಡಿಸಿದ ಎಸ್.ಕೆ.ಮೋದಿ ಅವರಿಗೆ ಶ್ರೀಕೃಷ್ಣ ದೇವರಾಯ ವಿವಿ ಗೌರವ ಡಾಕ್ಟರೇಟ್ ಘೋಷಿಸಿದೆ. ವಿವಿ ಆವರಣದಲ್ಲಿ ಸೆಪ್ಟಂಬರ್ 6(ನಾಳೆ) ರಂದು ನಡೆಯುವ ಘಟಿಕೋತ್ವವ ಕಾರ್ಯಕ್ರಮದಲ್ಲಿ ಮೂವರು ಗಣ್ಯರಿಗೂ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತದೆ ಎಂದು ಕುಲಸಚಿವರು ತಿಳಿಸಿದ್ದಾರೆ. : , , ‘