ಮಾಜಿ ಕಾರ್ಪೊರೇಟರ್ ​ಬಾಮೈದನ ಮನೆ ಮೇಲೆ ಐಟಿ ದಾಳಿ: 40 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆ. ಬೆಂಗಳೂರು,ಅಕ್ಟೋಬರ್,13,2023(..):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಬೇಟೆ ಮುಂದುವರೆದಿದ್ದು, ಮಾಜಿ ಕಾರ್ಪೊರೇಟರ್​ ಅಶ್ವತ್ಥಮ್ಮ ಬಾಮೈದ ಪ್ರದೀಪ್ ಮನೆ ದಾಳಿ ನಡೆಸಿದ್ದಾರೆ. ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರ ಪ್ರದೀಪ್ ​ಗೆ ಸೇರಿದ ಫ್ಲ್ಯಾಟ್​ನ ಬೆಡ್​​ ರೂಮ್​ನಲ್ಲಿ 23 ಬಾಕ್ಸ್​​ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಪ್ರದೀಪ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಶ್ವತ್ಥಮ್ಮ ಪತಿ ಅಂಬಿಕಾಪತಿಗೆ ಸೇರಿದ ಕಚೇರಿಗಳಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಶ್ವತ್ಥಮ್ಮ, ಪತಿ ಅಂಬಿಕಾಪತಿ, ಪ್ರದೀಪ್ ಮೂವರ ಬ್ಯಾಂಕ್ ಖಾತೆಗಳನ ಲಾಕರ್ ಪರಿಶೀಲಿಸುತ್ತಿದ್ದಾರೆ. ಪತ್ತೆಯಾದ ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. : – - - - 40 -