ಬರ, ಕಾವೇರಿ ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು: ರಾಜ್ಯ ಸರ್ಕಾರಕ್ಕೆ ಸ್ಟ್ರೋಕ್ ಆಗಿದೆ-ಮಾಜಿ ಸಿಎಂ ಬೊಮ್ಮಾಯಿ ಕಿಡಿ. ಹುಬ್ಬಳ್ಳಿ,ಅಕ್ಟೋಬರ್,10,2023(..):ಬರಗಾಲ, ಕಾವೇರಿ ವಿವಾದ ಎಲ್ಲಾ ವಿಚಾರಕ್ಕೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರದ ಸ್ಟ್ರೋಕ್ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿದ್ಯುತ್ ಅಭಾವವಾದರೂ ಸಹ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ವಿದ್ಯುತ್ ಪೂರೈಸೋದು ರಾಜ್ಯ ಸರ್ಕಾರದ ಕರ್ತವ್ಯ . ಕೇಂದ್ರ ಸರ್ಕಾರ ಏನು ಸಹಾಯ ಮಾಡಬೇಕು ಮಾಡುತ್ತದೆ. ಆದರೆ ಎಲ್ಲಾ ವಿಚಾರಕ್ಕೂ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದರು. : - - – - - - -