ಚಾಮುಂಡೇಶ್ವರಿ ಪ್ರಾಧಿಕಾರ ವಿವಾದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಿ- ಸಂಸದ ಸುನೀಲ್ ಬೋಸ್ ಚಾಮರಾಜನಗರ, ಸೆಪ್ಟಂಬರ್,4,2024 (..):ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ರಚನೆ ವಿಚಾರ ಸಂಬಂಧ ವಿವಾದವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಿ ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ಸಲಹೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಂಸದ ಸುನೀಲ್ ಬೋಸ್, ನ್ಯಾಯಾಲಯದಿಂದ ತಡೆಯಾಜ್ಞೆ ತೆರವಾಗಿದ್ದರಿಂದ ಸಿಎಂ ಸಭೆ ಮಾಡಿದ್ದಾರೆ . ನ್ಯಾಯಾಲಯ ನೀಡುವ ಅಂತಿಮ ತೀರ್ಪುಗೆ ಎ‍ಲ್ಲರೂ ಬದ್ಧರಾಗಿರಬೇಕು ಎಂದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಾದ ಆಗೋದು ಇಷ್ಟ ಇಲ್ಲ. ಹಾಗೇ ನೋಡಲು ಹೋದರೆ ಮೈಸೂರಿನಲ್ಲಿರುವ ಎಲ್ಲಾ ಆಸ್ತಿ ರಾಜಮನೆತನದ್ದೆ. ಮೈಸೂರಿನ ಚಾಮುಂಡೇಶ್ವರಿ ತಾಯಿ ನಾಡಿನ ಎಲ್ಲರಿಗೂ ಸೇರಿದವಳು. ವಿವಾದವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಿ ಎಂದರು. : , , ,