ಕಾವೇರಿ ವಿವಾದ ವಿಚಾರದಲ್ಲಿ ಮೌನ ವಹಿಸಬೇಡಿ: ದಿಟ್ಟ ನಿರ್ಧಾರಕ್ಕೆ ಬನ್ನಿ- ಸಿಎಂ ಸಿದ್ಧರಾಮಯ್ಯಗೆ ವಾಟಾಳ್ ನಾಗರಾಜ್ ಸಲಹೆ. ಮಂಡ್ಯ,ಅಕ್ಟೋಬರ್,5,2023(..):ಸಿಎಂ ಸಿದ್ಧರಾಮಯ್ಯ ಅವರೇ ಕಾವೇರಿ ವಿವಾದ ವಿಚಾರದಲ್ಲಿ ಮೌನ ವಹಿಸಬೇಡಿ. ದಿಟ್ಟ ನಿರ್ಧಾರಕ್ಕೆ ಬನ್ನಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು. ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವುದನ್ನ ವಿರೋಧಿಸಿ ಇಂದು ರ್ಯಾಲಿ ನಡೆಸಿದ್ದು ಮಂಡ್ಯದಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯನವರೇ ನಿಮ್ಮ ಜೀವನದಲ್ಲಿ ಇಂತಹ ಸಂದರ್ಭ ಸಿಗಲ್ಲ. ಅಧಿಕಾರಿ ಹೋಗುತ್ತಾ ಹೋಗಲಿ, ಸಿಎಂ ಸ್ಥಾನದಿಂದ ಇಳಿಸಲಾಗಲ್ಲ. ರಾಷ್ಟ್ರಪತಿ ಆಳ್ವಿಕೆ ತರುತ್ತಾರಾ ತರಲಿ, ಸರ್ಕಾರ ತೆಗೆದು ನೀರು ಬಿಡಲಾಗಲ್ಲ. ಹೀಗಾಗಿ ದಿಟ್ಟ ನಿರ್ಧಾರಕ್ಕೆ ಬನ್ನಿ. ನಿನ್ನ ನಿರ್ಧಾರ ಐತಿಹಾಸಿಕ ಪುಟ ಸೇರಲಿದೆ ಎಂದರು. ಕಾವೇರಿ ನದಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. : –-- - - - .