ಕೋಮುಗಲಭೆ ಮಾಡಿಸುವುದು ಬಿಜೆಪಿ ಹುಟ್ಟುಗುಣ: ಅವರ ಕಾರ್ಯಕರ್ತರೇ ವೇಷ ಬದಲಿಸಿ ಕೃತ್ಯವೆಸಗುತ್ತಾರೆ-ಸಚಿವ ರಾಮಲಿಂಗರೆಡ್ಡಿ. ಬೆಂಗಳೂರು,ಅಕ್ಟೋಬರ್,4,2023(..):ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಕೋಮುಗಲಭೆ ಮಾಡಿಸುವುದು ಬಿಜೆಪಿ ಹುಟ್ಟುಗುಣ. ಬಿಜೆಪಿ ಕಾರ್ಯಕರ್ತರೇ ವೇಷ ಬದಲಿಸಿ ಕೃತ್ಯವೆಸಗುತ್ತಾರೆ. ಬಿಜೆಪಿಯವರು ಅಧಿಕಾರದಲ್ಲಿ ಇಲ್ಲದಿರುವಾಗ ತಂದಿಡುವ ಕೆಲಸ ಮಾಡುತ್ತಾರೆ . ನೈತಿಕ ಪೊಲೀಸ್ ಗಿರಿ ಮಾಡಿಸುವುದು ಬಿಜೆಪಿ ಕೆಲಸ. ಬಿಜೆಪಿ ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡುತ್ತೆ. ಹುಟ್ಟುಗುಣ ರಕ್ತದಲ್ಲೇ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. : – – - – - .