ಕಾವೇರಿ ವಿವಾದ: ನಿವೃತ್ತ ನ್ಯಾಯಮೂರ್ತಿಗಳು, ಕಾನೂನು ತಜ್ಞರ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ, ಚರ್ಚೆ. ಬೆಂಗಳೂರು,ಸೆಪ್ಟಂಬರ್,29,2023(..):ರಾಜ್ಯದಲ್ಲಿ ಎದುರಾಗಿರುವ ಕಾವೇರಿ ನೀರು ಸಂಕಷ್ಟ ಕುರಿತು ನಿವೃತ್ತನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರ ಜೊತೆ ಸಿಎಂ ಸಿದ‍್ಧರಾಮಯ್ಯ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ನಿವೃತ್ತನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಂಎನ್ ವೆಂಕಟಾಚಲಯ್ಯ, ಶಿವರಾಜ್ ಪಾಟೀಲ್, ಗೋಪಾಲಗೌಡ, ಎಎನ್ ವೇಣುಗೋಪಾಲಗೌಡ. ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ, ಮಾಜಿ ಎಜಿಗಳಾದ ಎಚ್ ವಿ ಅಚಾರ್ಯ ಮಧುಸೂಧನ್ ನಾಯ್ಕ್. ಉದಯ್ ಹೊಳ್ಳ, ಪ್ರಬುಲಿಂಗ ನಾವದಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದಾರೆ. ರಾಜ್ಯಕ್ಕೆ ಎದುರಾಗಿರುವ ಕಾವೇರಿ ಜಲಸಂಕಷ್ಟ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ. : - –- - ,