ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಗೆ ಬೆಂಬಲ: ಮೈಸೂರಿನಲ್ಲಿ ಬಿಜೆಪಿಯಿಂದ ಬೈಕ್ ರ್ಯಾಲಿ. ಮೈಸೂರು,ಸೆಪ್ಟಂಬರ್,ಸೆಪ್ಟಂಬರ್,29,2023(..):ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಇಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಈ ನಡುವೆ ಬಂದ್ ಬೆಂಬಲಿಸಿ ಸಾಂಸ್ಕೃತಿಕನಗರಿ ಮೈಸೂರಿನಲ್ಲಿ ಬಿಜೆಪಿ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. ಕರ್ನಾಟಕ ಬಂದ್ ಗೆ ನಗರ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು ನಗರದ ಅಧ್ಯಕ್ಷರು, ಶಾಸಕ ಟಿ.ಎಸ್.ಶ್ರೀ ವತ್ಸ ರವರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೈವಿ ರವಿಶಂಕರ್, ನಾಗೇಂದ್ರ, ಸಂದೇಶ್ ಸ್ವಾಮಿ, ಯಶಸ್ವಿ ಸೋಮಶೇಖರ್, ರಘು ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು. ಬಿಜೆಪಿ ಕಚೇರಿಯಿಂದ ಹೊರಟ ಬೈಕ್ ರ್ಯಾಲಿ, ಕೆ.ಜಿ.ಕೊಪ್ಪಲ್, ಸರಸ್ವತಿ ಪುರಂ, ಕುವೆಂಪು ನಗರ, ವಿಜಯ ಬ್ಯಾಂಕ್ ಸರ್ಕಲ್, ಅಗ್ರಹಾರ, ಸಯ್ಯಾಜಿರಾವ್ ರಸ್ತೆ, ಎಸ್.ಪಿ.ಅಫಿಸ್ ವ್ಥತ್ತ, ಉದಯಗಿರಿ, ಅಶೊಕ ರಸ್ತೆ, ಅರಸು ರಸ್ತೆ, ಜೆ. ಎಲ್.ಬಿ.ರಸ್ತೆ, ರಾಮಸ್ವಾಮಿ ವೃತ್ತ ಮುಖಾಂತರ ಮತ್ತೆ ಬಿಜೆಪಿ ಕಚೇರಿ ತಲುಪಿತು. ಈ ಮೂಲಕ ಕಾವೇರಿ ನೀರಿಗಾಗಿ ಬಂದ್ ಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. : - – - – – .