ಸಂಸದರ ಮನೆಗಳಿಗೆ ನುಗ್ಗುವ ಮುನ್ನ ಸ್ವಾಭಿಮಾನ ಇದ್ರೆ ರಾಜೀನಾಮೆ ಕೊಡಿ- ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹ. ಬೆಂಗಳೂರು,ಸೆಪ್ಟಂಬರ್,28,2023(..):ಕಾವೇರಿ, ಮಹಾದಾಯಿ, ನಾಡು,ನುಡಿ ಜಲ ವಿಚಾರದಲ್ಲಿ ನಮ್ಮ ರಾಜ್ಯದ ಸಂಸದರಿಗೆ ಬದ್ಧತೆ ಇಲ್ಲ. ಕರವೇ ಕಾರ್ಯಕರ್ತರು ಸಂಸದರ ಮನೆಗಳಿಗೆ ನುಗ್ಗುವ ಮುನ್ನ ಸ್ವಾಭಿಮಾನ ಇದ್ರೆ ರಾಜೀನಾಮೆ ಕೊಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹಿಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರನ್ನ ತಮಿಳುನಾಡು ಹರಿಸುವಂತೆ ಆದೇಶಿಸಲಾಗಿದೆ. ತಮಿಳುನಾಡಿನಲ್ಲಿ ಸಂಸದರು ಒಗ್ಗಟ್ಟಾಗಿ ತಮ್ಮ ಎದೆಗಾರಿಕೆ ತೊರಿಸುತ್ತಾರೆ. ಅವರು ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ನಮ್ಮ ಸಂಸದರು ಪುಣ್ಯಾತ್ಮರು. ಇವರಿಗೆ ಭಾರತ ರತ್ನ ಕೊಡಬೇಕು. ಕಾವೇರಿ ಮಹಾದಾಯಿ ವಿಚಾರದಲ್ಲಿ ಬದ್ಧತೆ ಇಲ್ಲ ನಮ್ಮ ಸಂಸದರು ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದು ಕಿಡಿಕಾರಿದರು. ನಾಡು ನುಡಿ ಜನ ವಿಚಾರದಲ್ಲಿ ಅಂಬರೀಶ್ ರನ್ನ ನೆನೆಪಿಸಿಕೊಳ್ಳಬೇಕು. ಕಾವೇರಿ ನೀರಿಗಾಗಿ ಅಂದು ಕೇಂದ್ರಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಅಂತಹ ಸಂಸದರನ್ನ ನೋಡಿಯೇ ಇಲ್ಲ ಎಂದು ನಾರಾಯಣಗೌಡ ತಿಳಿಸಿದರು. : -- – - -.