ಕಾಂಗ್ರೆಸ್ ಸೇರ್ಪಡೆಗೆ ಆನೇಕರು ಒಲವು: ನಮಗೆ ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು,ಸೆಪ್ಟಂಬರ್,27,2023(..):ಕಾಂಗ್ರೆಸ್ ಸೇರ್ಪಡೆಗೆ ಆನೇಕ ಮುಖಂಡರು ಒಲವು ತೋರಿಸಿದ್ದಾರೆ. ಹೀಗಾಗಿ ನಮಗೆ ಆಪರೇಷನ್ ಹಸ್ತ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಜೆಡಿಎಸ್-ಬಿಜೆಪಿ ಮೈತ್ರಿ ಬೆನ್ನಲ್ಲೇ ಹಲವು ಮುಖಂಡರು ಕಾಂಗ್ರೆಸ್ ​ಗೆ ಬರ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಅನೇಕರು ಒಲವು ತೋರಿಸುತ್ತಿದ್ದಾರೆ. ಮೂವರು ಮಾಜಿ ಶಾಸಕರು ಪಕ್ಷ ಸೇರುತ್ತೇನೆ ಅಂತ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ವಿರೋಧಿಸಿ ಮುಖಂಡರು ಹೊರ ಬರುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲೂ ಕಾಂಗ್ರೆಸ್​ ಗೆ ಸೇರುವ ಆಸೆ ವ್ಯಕ್ತಪಡಿಸಿದ್ದು, ಸೂಕ್ತ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವನ್ನು ಮಾಡಿದ್ದಾರೆ. ಸ್ಥಳೀಯ ಚುನಾವಣೆ, ಕಾರ್ಪೊರೇಷನ್ ಚುನಾವಣೆ ಹತ್ತಿರ ಬರುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. : - - -’ - – - -