ಗ್ಯಾರಂಟಿ ಕೊಡ್ತೀವಿ ಅಂತಾ ಮತ ಹಾಕಿಸಿಕೊಂಡು ಕಾಂಗ್ರೆಸ್ ಈಗ ಜನರ ದಾರಿ ತಪ್ಪಿಸುತ್ತಿದೆ- ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ. ಬೆಂಗಳೂರು,ಸೆಪ್ಟಂಬರ್,28,2023(..):ಗ್ಯಾರಂಟಿ ಕೊಡ್ತೀವಿ ಅಂತಾ ಮತ ಹಾಕಿಸಿಕೊಂಡು ಕಾಂಗ್ರೆಸ್ ಈಗ ಜನರ ದಾರಿ ತಪ್ಪಿಸುತ್ತಿದೆ ಎಂದು ಜೆಡಿಎಸ್ ಮುಖಂಡರ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿಮ, ಸರ್ಕಾರ ನಿರ್ಲಕ್ಷ್ಯ ವಹಿಸದೆ ರೈತರ ಪರ ನಿಲ್ಲಬೇಕು ತಮಿಳುನಾಡಿಗೆ ನೀರು ಹರಿಸುವಂತೆ ‘ಕೋರ್ಟ್​ನಿಂದ ಆದೇಶ ಹೊರಡಿಸಿದೆ, ಕಾವೇರಿ ಬೋರ್ಡ್ ಮಾಹಿತಿ ನೀಡಿರುವ ಪ್ರಕಾರ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಹೇಳಿದೆ. ಇದರಿಂದ 7.5 ಟಿಎಂಸಿ ನೀರು ಖಾಲಿಯಾಗುತ್ತೆ. ಮೊನ್ನೆ ದಿನ ಶ್ರೀರಂಗಪಟ್ಟಣದಲ್ಲಿ ನೀರು ಖಾಲಿಯಾಗಿರುವುದು ನೋಡಿದ್ದೀವಿ. ತಮಿಳುನಾಡಿಗೆ 1.80 ಸಾವಿರ ಹೆಕ್ಟೇರ್​ಗೆ ನೀರು ಹರಿಸಲು ಅನುಮತಿ ಇದೆ. ಆದ್ರೆ, ಸರಿಸುಮಾರು 4 ಲಕ್ಷ ಹೆಕ್ಟೇರ್ ಗೆ ನೀರು ಹರಿಸಲಾಗುತ್ತಿದೆ. ಇದರ ಬಗ್ಗೆ ಯಾರು ಪ್ರಶ್ನೆ ಮಾಡುತ್ತಿಲ್ಲ. ಓರ್ವ ಯುವಕನಾಗಿ ಆಗ್ರಹ ಮಾಡ್ತೀನಿ ಸರ್ಕಾರ ರೈತರನ್ನ ಉಳಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. : – – – – –