ಮೈಸೂರು ದಸರಾ: ತೂಕ ಪರೀಕ್ಷೆ ಮಾಡಿಸಿಕೊಂಡ ಗಜಪಡೆ. ಮೈಸೂರು,ಸೆಪ್ಟಂಬರ್,27,2023(..):ವಿಶ್ವ ವಿಖ್ಯಾತ ಮೈಸೂರು ಮಹೋತ್ಸವ ದಸರಾ ಮಹೋತ್ಸವ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಆಗಮಿಸಿದ ಗಜಪಡೆ ಆನೆಗಳಿಗೆ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂ ಪರೀಕ್ಷೆ ಮಾಡಲಾಯಿತು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ನಡೆಯಿತು. ದಸರಾ ಗಜಪಡೆ ಆನೆಗಳ ತೂಕದ ವಿವರ ಹೀಗಿದೆ. ಅಭಿಮನ್ಯು – 5,300 ವಿಜಯ – 2,885 ಭೀಮ – 4,685 ವರಲಕ್ಷ್ಮಿ – 3,170 ಮಹೇಂದ್ರ – 4660 ಧನಂಜಯ – 4,990 ಕಂಜನ್ – 4,395 ಗೋಪಿ – 5145 ಹಿರಣ್ಯ – 2915 ರೋಹಿತ್ – 3360 ಸುಗ್ರೀವ – 5035 ಪ್ರಶಾಂತ್ – 4970 ಲಕ್ಷ್ಮಿ – 3235 ಅರ್ಜುನ – 5680 : - - – - .