ಡಿಸೆಂಬರ್ 22ಕ್ಕೆ ಪ್ರಭಾಸ್- ಪ್ರಶಾಂತ್ ನೀಲ್ ಜೋಡಿಯ ಸಲಾರ್ ರಿಲೀಸ್ ?! ಬೆಂಗಳೂರು, ಸೆಪ್ಟೆಂಬರ್ 26, 2023 (..):ಪ್ರಶಾಂತ್ ನೀಲ್ ಡಿಸೆಂಬರ್ 22 ರಂದು ಸಲಾರ್ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ 1 ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿತ್ತು. ಆದರೆ ಹೊಸ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿರಲಿಲ್ಲ. ಇದೀಗ ರಿಲೀಸ್ ಡೇಟ್ ಕುರಿತ ಹೊಸ ಸುದ್ದಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಡಿಸೆಂಬರ್ 22 ರಂದು ಸಲಾರ್ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಡಿಸೆಂಬರ್ 22 ಪ್ರಶಾಂತ್ ನೀಲ್ ಪಾಲಿಗೆ ಅದೃಷ್ಟದ ದಿನ. ಕೆಜಿಎಫ್ 1 ಸಿನಿಮಾ ರಿಲೀಸ್ ಆಗಿದ್ದು ಡಿಸೆಂಬರ್ 21 ರಂದು. ಹೀಗಾಗಿ ಇದೇ ದಿನಕ್ಕೆ ಸಲಾರ್ ಕೂಡಾ ರಿಲೀಸ್ ಮಾಡುವ ಚಿಂತನೆ ಇದೆ ಎನ್ನಲಾಗಿದೆ.