ಕಾವೇರಿ ನೀರಿಗಾಗಿ ಸೆ.29 ರಂದು ಅಖಂಡ ಕರ್ನಾಟಕ ಬಂದ್ – ವಾಟಾಳ್ ನಾಗರಾಜ್ ಘೋಷಣೆ. ಬೆಂಗಳೂರು,ಸೆಪ್ಟಂಬರ್,25,2023(..):ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಿದ್ದರೂ ಸಹ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಇಂದು ಈ ಕುರಿತು ಸಭೆ ನಡೆಸಿ ಚರ್ಚಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸೆ.29ರಂದು ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಕಂಪ್ಲೀಟ್ ಬಂದ್ ಆಗಬೇಕು. ರಾಜ್ಯದಲ್ಲಿ ಏನೇ ಸಮಸ್ಯೆ ಬಂದ್ರೂ ಧರಣಿ ಮಾಡುತ್ತೇವೆ ಕರ್ನಾಟಕ ಬಂದ್ ಗೆ ರಾಜ್ಯದ ಜನರು ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು. : 29 - - –