ಕಾವೇರಿ ವಿವಾದ: ಬಿಜೆಪಿ ಪರೋಕ್ಷವಾಗಿ ತಮಿಳುನಾಡಿಗೆ ಸಪೋರ್ಟ್ ಮಾಡ್ತಿದೆ- ಸಚಿವ ಈಶ್ವರ್ ಖಂಡ್ರೆ. ಬೀದರ್,ಸೆಪ್ಟಂಬರ್,20,2023(..):ಕಾವೇರಿ ವಿವಾದ ಸಂಬಂಧ ಬಿಜೆಪಿ ಪರೋಕ್ಷವಾಗಿ ತಮಿಳುನಾಡಿಗೆ ಸಪೋರ್ಟ್ ಮಾಡ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಬಿಜೆಪಿಯವರು ಪರೋಕ್ಷವಾಗಿ ತಮಿಳುನಾಡಿಗೆ ಸಪೋರ್ಟ್ ಮಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮೋದಿ ಎದುರು ಮಾತನಾಡಲ್ಲ. ರಾಜ್ಯಕ್ಕೆ ಅನುದಾನ ತರುವಲ್ಲಿಯೂ ಸಂಸದರು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ತೋರಿಕೆಗೆ ಮಾತ್ರ. ಬಿಜೆಪಿ ಪಕ್ಷದಲ್ಲಿ ಆಂತರಿಕ ತಿಕ್ಕಾಟ ಹೆಚ್ಚಿದೆ. ಬಿಜೆಪಿ ವಿಪಕ್ಷನ ನಾಯಕನನ್ನ ಆಯ್ಕೆ ಮಾಡುತ್ತಿಲ್ಲ. ಜೆಡಿಎಸ್ ನಲ್ಲೂ ಮೈತ್ರಿ ಕುರಿತು ಅಪಸ್ವರವಿದೆ. ಹೀಗಾಗಿ ಮೈತ್ರಿಯಿಂದ ಕಾಂಗ್ರೆಸ್ ಗೆ ಯಾವುದೇ ಸಮಸ್ಯೆಯಾಗಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು. : - – - - – - .