ರಿಯಲ್ ಸ್ಟಾರ್ ಉಪೇಂದ್ರ ‘’ ಸಿನಿಮಾ ಟೀಸರ್ ನೋಡಿದ್ವಾ? ಎಲ್ಲ ಕೇಳಿದ್ವಾ..?! ತಲೆಗೆ ‘ಹುಳ ಬಿಟ್ಟುಕೊಂಡ’ ಫ್ಯಾನ್ಸ್ ! ಬೆಂಗಳೂರು, ಸೆಪ್ಟೆಂಬರ್ 19, 2023 (..):ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ‘’ ಸಿನಿಮಾ ಟೀಸರ್ ರಿಲೀಸ್ ಮಾಡಿದ್ದಾರೆ. ನಗರದ ಊರ್ವಶಿ ಥಿಯೇಟರ್‌ನಲ್ಲಿ ನಿನ್ನೆ ಟೀಸರ್ ಪ್ರಸಾರ ಮಾಡಲಾಗಿದೆ. ಟೀಸರ್ ನೋಡಿದರು ಅಲ್ಲ ಅಲ್ಲ ಕೇಳಿದವರು !! ಇದು ಪಕ್ಕಾ ಉಪ್ಪಿ ಸ್ಟೈಲ್ ಸಿನಿಮಾ ಎಂದಿದ್ದಾರೆ. ಕತ್ತಲೆ ಎಲ್ಲಾ ಕಡೆ ಕತ್ತಲೆ.. ಯಾವ ತರ ಜಾಗ ಇದು.. ನೀರಿನ ಸದ್ದು ಕೇಳಿಸ್ತಾ ಇದೆ. ಈ ಕತ್ತಲೆಯಿಂದ ಹೇಗೆ ತಪ್ಪಿಸಿಕೊಳ್ಳಿ.. ಬೆಳಕು ಕಂಡ್ರೆ, ಶಬ್ಧ ಕೇಳಿಸಿದ್ರೆ ಹೊಡೆದು ಹಾಕ್ತಾರೆ.. ಇಲ್ಲಿಂದೆ ಹೇಗೆ ಎಸ್ಕೇಪ್ ಆಗೋದು. ಕಾಮ್ ಆಗಿ ಯೋಚನೆ ಮಾಡು.. ಕಾಂನ್ಸಟ್ರೇಟ್‌” ಹೀಗೆ ಉಪೇಂದ್ರ ಡೈಲಾಗ್‌ ಮಾತ್ರ ‘’ ಸಿನಿಮಾ ಟೀಸರ್‌ನಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ‘’ ಚಿತ್ರಕ್ಕಿದೆ. ಬರೀ ಬಿಜಿಎಂ ಹಾಗೂ ಡೈಲಾಗ್‌ ಮಾತ್ರ ಟೀಸರ್‌ನಲ್ಲಿದೆ. ಒಂದರ್ಥದಲ್ಲಿ ಇದು ಆಡಿಯೋ ಟೀಸರ್ ಎನ್ನಬಹುದು. ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಉಪ್ಪಿ-2’ ಬಳಿಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಉಪೇಂದ್ರ ನಟಿಸಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.