ಸಂಜೆಯೊಳಗೆ ಸಚಿವ ಭೈರತಿ ಸುರೇಶ್ ರಾಜೀನಾಮೆ ಪಡೆಯಿರಿ- ಶಾಸಕ ಶ್ರೀವತ್ಸ ಆಗ್ರಹ ಮೈಸೂರು, ಸೆಪ್ಟಂಬರ್,3,2024 (..):ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ರನ್ನು ಅಮಾನತು ಮಾಡಲಾಗಿದ್ದು ಈ ಕುರಿತು ಬಿಜೆಪಿ ಶಾಸಕ ಶ್ರೀವತ್ಸ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಶಾಸಕ ಶ್ರೀವತ್ಸ, ಸಂಜೆಯೊಳಗೆ ಭೈರತಿ ಸುರೇಶ್ ರಾಜೀನಾಮೆ ಪಡೆಯಿರಿ. ಮುಡಾದಲ್ಲಿ ಅದ್ವಾನ ನಡೆಯಲು ಸಚಿವರೇ ಕಾರಣ. ಕೇವಲ ದಿನೇಶ್ ಕುಮಾರ್ ಅಮಾನತು ಸಾಲದು ಅಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. : , , , ,