ಕಾವೇರಿ ವಿಚಾರದಲ್ಲೂ ರಾಜಕೀಯ: ಇಂಡಿಯಾ ಮೈತ್ರಿಕೂಟ ಮೆಚ್ಚಿಸಲು ತಮಿಳುನಾಡಿಗೆ ನೀರು-ಮಾಜಿ ಸಿಎಂ ಬಿಎಸ್ ವೈ ಆರೋಪ. ಬೆಂಗಳೂರು,ಸೆಪ್ಟಂಬರ್,15,2023(..):ಕಾವೇರಿ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ. ಇಂಡಿಯಾ ಒಕ್ಕೂಟ ಮೆಚ್ಚಿಸಲು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕಾವೇರಿ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿಫಲರಾಗಿದ್ದಾರೆ. ಸರ್ಕಾರದ ಧೋರಣೆಯನ್ನ ನಾನು ಖಂಡಿಸುತ್ತೇನೆ. ಸಿದ್ಧರಾಮಯ್ಯ ಕರ್ನಾಟಕದ ಮುಖ್ಯಮಂತ್ರಿನಾ ಅಥವಾ ತಮಿಳುನಾಡಿನ ಮುಖ್ಯಮಂತ್ರಿನಾ..? ಎಂದು ಗರಂ ಆದರು. ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ನೀರಿಲ್ಲ, ಮೇವಿಲ್ಲ, ಜನರು ಸಂಕಷ್ಟದಲ್ಲಿ ಇದ್ದಾರೆ. ಕಾವೇರಿ ನೀರಿನ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ. ಈ ಹಿನ್ನಲೆ ಇಂಡಿಯಾ ಮೈತ್ರಿಕೂಟ ಬಲಪಡಿಸಲು ಸರ್ಕಾರ ನೀರು ಹರಿಸುತ್ತಿದೆ. ಸುಪ್ರೀಂಕೋರ್ಟ್​​ಗೆ ಮನವರಿಕೆ ಮಾಡಿಕೊಡಲು ಸರ್ಕಾರ ವಿಫಲವಾಗಿದೆ. ಇನ್ನಾದರೂ ಸುಪ್ರೀಂಕೋರ್ಟ್​ಗೆ ಸರ್ಕಾರ ಮನವರಿಕೆ ಮಾಡಲಿ, ರಾಜ್ಯ ಕಾಂಗ್ರೆಸ್​ ಸರ್ಕಾರ ಪರೋಕ್ಷವಾಗಿ ಡಿಎಂಕೆಗೆ ಸಹಕರಿಸುತ್ತಿದೆ ಎಂದು ಬಿಎಸ್ ವೈ ವಾಗ್ದಾಳಿ ನಡೆಸಿದರು. : - - - – – .