ಕಾವೇರಿ ನದಿ ನೀರು ವಿಚಾರ: ಸರ್ವಪಕ್ಷ ಸಭೆಗೆ ಹಾಜರಾಗಲು ಆಗಲ್ಲ-ಮಾಜಿ ಸಿಎಂ ಬಿಎಸ್ ವೈ. ಬೆಂಗಳೂರು,ಸೆಪ್ಟಂಬರ್,13,2023(..):ಪ್ರತಿ ದಿನ 5 ಸಾವಿರ ಕ್ಯೂಸೆಕ್ ನಂತೆ ಮತ್ತೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ ಸೂಚಿಸಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಆದರೆ ಸರ್ವಪಕ್ಷ ಸಭೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗೈರಾಗಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾವೇರಿ ನೀರಿನ ವಿಚಾರದಲ್ಲಿ ಇಂದಿನ ಸರ್ವಪಕ್ಷ ಸಭೆಗೆ ನನಗೂ ಅಹ್ವಾನ ನೀಡಿದ್ದರು. ಸರ್ವಪಕ್ಷ ಸಭೆಗೆ ಕರೆದಿದ್ರು. ಆದರೆ ನಾನು ದೆಹಲಿಗೆ ಹೋಗುತ್ತಿರುವುದರಿಂದ ಸರ್ವಪಕ್ಷ ಸಭೆಗೆ ನಾನು ಬರಲು ಆಗಲ್ಲ ಎಂದಿದ್ದೇನೆ ಎಂದರು. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಬಿಎಸ್ ವೈ ತಿಳಿಸಿದರು. : - -: -- -- -- -